Twitter | Search | |
ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi
Official page of Laxman Savadi. Deputy Chief Minister of Karnataka. Minister for Transport. BJP Karyakarta.
656
Tweets
86
Following
12,417
Followers
Tweets
ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi 9h
ಇಂದು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿ ಹುಬ್ಬಳ್ಳಿಯಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಶಾಸಕರಾದ ಶ್ರೀ ಅರವಿಂದ ಬೆಲ್ಲದ, ಶ್ರೀ ಪ್ರಸಾದ್ ಅಬ್ಬಯ್ಯ, NWKRTC ಅಧ್ಯಕ್ಷರಾದ ಶ್ರೀ ವಿ.ಎಸ್. ಪಾಟೀಲ್, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ದರು.
Reply Retweet Like
ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi 11h
ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಕೊರೊನಾ ಹರಡದಂತೆ ಎಚ್ಚರ ವಹಿಸೋಣ ಆದರೆ ಕೊರೊನಾ ಪೀಡಿತರು ಮತ್ತು ಕುಟುಂಬಗಳ ಬಗ್ಗೆ ಯಾವುದೇ ಕಾರಣಕ್ಕೂ ತಾತ್ಸಾರ, ತಾರತಮ್ಯ ಮಾಡುವುದು ಬೇಡ ಎಲ್ಲರೂ ಒಗ್ಗಟ್ಟಾಗಿ ಈ ಮಹಾಮಾರಿಯ ವಿರುದ್ಧ ಹೋರಾಡೋಣ. ಹೆಚ್ಚಿನ ಮಾಹಿತಿಗಾಗಿ ಗೆ ಭೇಟಿ ನೀಡಬೇಕಾಗಿ ನನ್ನ ಮನವಿ
Reply Retweet Like
ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi May 25
ಭಾರತೀಯ ರೈಲ್ವೆಯು ಇದುವರೆಗೆ ದೇಶವ್ಯಾಪಿ 2,050 ಶ್ರಮಿಕ್ ರೈಲುಗಳಲ್ಲಿ 30 ಲಕ್ಷಕ್ಕೂ ಅಧಿಕ ವಲಸಿಗರನ್ನು ಅವರವರ ತವರು ರಾಜ್ಯಗಳಿಗೆ ತಲುಪಿಸಿದೆ. ಉಚಿತ ಊಟ, ನೀರು, ಸಮರ್ಪಕ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸುವ ಮೂಲಕ ಪ್ರಯಾಣಿಕರ ಕಾಳಜಿ‌ ವಹಿಸಲಾಗಿದೆ. ವಲಸಿಗರ ಹಿತರಕ್ಷಣೆಗೆ ಮಾನ್ಯ ಶ್ರೀ ಸರಕಾರ ಬದ್ಧವಾಗಿದೆ.
Reply Retweet Like
ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi May 25
ದೇಶದ ಅತ್ಯುತ್ತಮ ಹಾಕಿ ಪಟು, ಮೂರು ಒಲಿಂಪಿಕ್ ಚಿನ್ನದ ಪದಕ ವಿಜೇತ, ಪದ್ಮಶ್ರೀ ಪುರಸ್ಕೃತ ಬಲ್ಬೀರ್ ಸಿಂಗ್ ದೋಸಾಂಜ್ ಅವರು ತಮ್ಮ 95 ನೇ ವಯಸ್ಸಿನಲ್ಲಿ ಚಂಡೀಘಡದ ಆಸ್ಪತ್ರೆಯೊಂದರಲ್ಲಿ ನಮ್ಮನ್ನಗಲಿದ್ದಾರೆ. ಅವರ ದಿವ್ಯಾತ್ಮಕ್ಕೆ ದೇವರು ಸದ್ಗತಿ ಕರುಣಿಸಲಿ‌. ಓಂ ಶಾಂತಿ.
Reply Retweet Like
ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi May 25
ಕೊರೋನಾ ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ನಿರಂತರವಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ನಮ್ಮ ಪಕ್ಷದ ಕಾರ್ಯಕ್ರಮಗಳು ಹಾಗೂ ಸೇವಾ ಕಾರ್ಯಗಳ ವಿವರ. ರಾಷ್ಟ್ರ ಸೇವೆಗೆ ಸದಾ ಸಮರ್ಪಿತ, ನಿರಂತರ.
Reply Retweet Like
ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi May 24
ರೈತರ ಹಿತ ದೃಷ್ಟಿಯಿಂದ ಅನ್ನದಾತರ ಸಾಲದ ಮೇಲಿನ ನಿಬಂಧನೆಗಳನ್ನು ಕರ್ನಾಟಕ ಸರ್ಕಾರ ಸಡಿಲಗೊಳಿಸಿದೆ. ಪ್ರತಿ ಕಷ್ಟಗಳಿಗೆ ಸ್ಪಂದಿಸಿ ರೈತರಿಗೆ ನೆರವಾಗುತ್ತಿದೆ ನಮ್ಮ ಸರ್ಕಾರ.
Reply Retweet Like
ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi May 24
ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್--ಉಲ್-ಫಿತ್ರ್‌ನ ಹಾರ್ದಿಕ ಶುಭಾಶಯಗಳು. ಕೊರೊನಾ ಎನ್ನುವ ಮಹಾಮಾರಿಯ ವಿರುದ್ಧ ಹೋರಾಡುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ. ಈ ಹಬ್ಬವು ಸರ್ವರ ಬದುಕಿನಲ್ಲಿ ಸಂತೋಷ ತರಲಿ.
Reply Retweet Like
ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi May 24
ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳನ್ನು ಔಪಚಾರಿಕಗೊಳಿಸುವ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ 10,000 ಕೋಟಿ ರೂ. ಒದಗಿಸಲಿವೆ. ಇದರಿಂದ 8 ಲಕ್ಷ ಸೂಕ್ಷ್ಮ ಉದ್ಯಮಗಳಿಗೆ ಪ್ರಯೋಜನವಾಗಲಿದ್ದು, 9 ಲಕ್ಷ ಹೊಸ ಮತ್ತು ನುರಿತ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
Reply Retweet Like
ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi May 24
ಕಾರ್ಮಿಕರಿಗೆ ಸುಲಭವಾಗಿ ಕೆಲಸ ಪಡೆಯಲು ಸಹಕಾರಿಯಾಗುವಂತೆ ರಾಜ್ಯ ಸರಕಾರ 'ಕಾಯಕ ಮಿತ್ರ' ಎನ್ನುವ ಆ್ಯಪ್ ಬಿಡುಗಡೆ ಮಾಡಿದೆ. ಅಪೇಕ್ಷಿತರು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ, ಸಂಪೂರ್ಣ ಮಾಹಿತಿಗಳನ್ನು ಭರ್ತಿ ಮಾಡಿ ಕೂಲಿಯ ಬೇಡಿಕೆಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಇಲ್ಲಿದೆ.
Reply Retweet Like
ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi May 24
ಹಗಲಿರುಳು, ದಣಿವರಿಯದೆ, ತಮ್ಮ ಸ್ವಂತ ಜೀವನವನ್ನು ಬದಿಗಿರಿಸಿ, ನಮ್ಮ ನಿಮ್ಮೆಲ್ಲರ ಆರೋಗ್ಯಕ್ಕಾಗಿ, ಸುರಕ್ಷತೆಗಾಗಿ, ನೆಮ್ಮದಿಗಾಗಿ ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸ್ ಗಳ ನಿಸ್ವಾರ್ಥ ಸೇವೆಗೆ ನಮನಗಳು.
Reply Retweet Like
ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi May 23
ಮೇ23ರ ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 7ರ ವರೆಗೆ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಇರಲಿದೆ. ಯಾವುದೇ ರೀತಿಯ ವಾಹನ ಮತ್ತು ಜನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಕೇವಲ ಅಗತ್ಯ ಸೇವೆಗಳಿಗೆ ಮಾತ್ರ ಲಾಕ್‌ಡೌನ್ ವಿನಾಯಿತಿ ಇರುತ್ತದೆ. ವಿನಾಕಾರಣ ಮನೆಯಿಂದ ಹೊರಗೆ ಬರದೆ ಲಾಕ್‌ಡೌನ್ ಅನ್ನು ಸಂಪೂರ್ಣವಾಗಿ ಯಶಸ್ವಿಯಾಗಿಸೋಣ.
Reply Retweet Like
ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi May 23
ಆಟೋ- ಟ್ಯಾಕ್ಸಿ ಚಾಲಕರಿಗೆ ಘೋಷಿಸಲಾಗಿದ್ದ ಕೋವಿಡ್ ಪರಿಹಾರ ನೀಡುವ ಅರ್ಜಿ ಫಾರಮ್ ಸೇವಾ ಸಿಂಧುವಿನಲ್ಲಿ ಲಭ್ಯವಿದೆ. ವಾಹನದ ವಿವರ ಮತ್ತು ವೈಯುಕ್ತಿಕ ವಿವರಗಳನ್ನು ನಮೂದಿಸಿ ಪರಿಹಾರ ಪಡೆಯಬಹುದು. ಅರ್ಜಿ ನೋಂದಾಯಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
Reply Retweet Like
ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi May 22
ಭಾರತದಲ್ಲಿ ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗಳು ಪುನರಾರಂಭಗೊಂಡಿದ್ದು, ಸರಕಾರ ಕೋವಿಡ್ -19 ವಿರುದ್ಧ ಆರ್ಥಿಕ ಯುದ್ಧ ಸಾರಿದೆ. ಎಲ್ಲಾ ಷರತ್ತು ಸಾಲಗಳ ಮಾಸಿಕ ಕಂತುಗಳ ಮೇಲಿದ್ದ ವಿನಾಯಿತಿಯನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ. ತೆಗೆದುಕೊಂಡಿರುವ ಮಹತ್ವದ ನಿರ್ಧಾರಗಳ ಸಂಕ್ಷಿಪ್ತ ಸಾರಾಂಶ ಇಲ್ಲಿದೆ.
Reply Retweet Like
ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi May 22
ಮೇ 31, 2020ರವರೆಗೆ‌ ತಮ್ಮ ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗಲು ಬಯಸುವ ವಲಸೆ ಕಾರ್ಮಿಕರ ಹಾಗೂ ಲಾಕ್‌ಡೌನ್‌ನಲ್ಲಿ ಸಿಲುಕಿರುವವರ ಪ್ರಯಾಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ.
Reply Retweet Like
ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi May 22
ನುಡಿದಂತೆ ನಡೆಯುವವನೇ ನಿಜವಾದ ಜನನಾಯಕ ಮುಖಕ್ಕೆ ಮಾಸ್ಕ್ ಯಾರಿಗೂ ಹಸ್ತಲಾಘವ ನೀಡದೇ, ನಮಸ್ಕಾರ ಹೇಳಿದ ಪ್ರಧಾನಿ ಸಾಮಾಜಿಕ ಅಂತರ, ಈಗಿನ ಹೊಸ ಶಿಷ್ಟಾಚಾರ ಎಂಬ ಅವರ ಹೇಳಿಕೆಯಂತೆ ನಡೆದುಕೊಂಡ ನಮ್ಮ ಹೆಮ್ಮೆಯ ಪ್ರಧಾನಿ.
Reply Retweet Like
ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi May 22
ವಿಶ್ವ ಆರೋಗ್ಯ ಸಂಸ್ಥೆಯ (WHO) ಕಾರ್ಯಕಾರಿ ಮಂಡಳಿಯ ಚೇರ್ಮನ್ ಆಗಿ ಅಧಿಕಾರ ಸ್ವೀಕರಿಸಿದ ಕೇಂದ್ರ ಆರೋಗ್ಯ ಸಚಿವರಾದ ಮಾನ್ಯ ಶ್ರೀ ರವರಿಗೆ ಅಭಿನಂದನೆಗಳು.
Reply Retweet Like
ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi May 21
ಇಂದು ಬೆಳಗ್ಗೆ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣದಲ್ಲಿ, ಪರಿಶೀಲನೆ ನಡೆಸಿ ಪ್ರಯಾಣಿಕರಿಗೆ ಸಾಮಾಜಿಕ ಅಂತರ, ಸ್ಯಾನಿಟೈಜರ್, ಮಾಸ್ಕ್ ಕಡ್ಡಾಯ ಬಳಕೆಯ ಬಗ್ಗೆ ತಿಳಿಸಲಾಯಿತು. ಸಂಚರಿಸಿದ ಬಸ್ ಗಳನ್ನು ಕೂಡ ಟ್ರಿಪ್ ಮುಗಿದ ನಂತರ ಸ್ಯಾನಿಟೈಜ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
Reply Retweet Like
ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi May 21
ಬಹುಪತ್ನಿತ್ವ, ಬಾಲ್ಯವಿವಾಹ, ಜಾತಿಪದ್ಧತಿ, ಭ್ರೂಣ ಹತ್ಯೆ, ಅನಕ್ಷರತೆಯನ್ನು ಹೋಗಲಾಡಿಸಲು ಸಾಕಷ್ಟು ಶ್ರಮಿಸಿದ ಸಮಾಜ ಸುಧಾರಕ, ಬ್ರಹ್ಮ ಸಮಾಜ ಚಳುವಳಿಯ ಹರಿಕಾರ, ಭಾರತೀಯ ಪುನರುಜ್ಜೀವನದ ಪಿತಾಮಹಾ ರಾಜಾರಾಮ್ ಮೋಹನ್ ರಾಯ್ ಅವರ ಜನ್ಮದಿನ ಇಂದು. ಅವರನ್ನು ಭಕ್ತಿಯಿಂದ‌‌ ಸ್ಮರಿಸೋಣ
Reply Retweet Like
ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi May 21
ಹಿರಿಯ ನಾಗರಿಕರಿಗೆ ಪಿಂಚಣಿ ಸೌಲಭ್ಯ ಒದಗಿಸುವ ಪ್ರಮುಖ ಯೋಜನೆಯಾಗಿರುವ 'ಪ್ರಧಾನಮಂತ್ರಿ ವಯ ವಂದನ' ಯೋಜನೆಯನ್ನು ಮಾ.31, 2023 ರ ತನಕ ವಿಸ್ತರಿಸಲಾಗಿದೆ. ಇದರ ಸದುಪಯೋಗವನ್ನು ನಾಡಿನ ಹಿರಿಯ ನಾಗರಿಕರು ಪಡೆದುಕೊಳ್ಳಬೇಕಾಗಿ ನನ್ನ ಮನವಿ.
Reply Retweet Like
ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi May 20
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಸಂಪೂರ್ಣ ಪಾರದರ್ಶಕವಾಗಿ ಯಾವುದೇ ಮಧ್ಯವರ್ತಿಗಳಿಲ್ಲದೆ ಹಣವನ್ನು ಫಲಾನುಭವಿಗಳ ಖಾತೆಗೆ DBT ಮೂಲಕ ನೇರವಾಗಿ ವರ್ಗಾಯಿಸಲಾಗಿದೆ. ಈ ಮೂಲಕ ಫಲಾನುಭವಿಗಳೆಡೆಗೆ ತಮ್ಮ ಬದ್ಧತೆಗಳನ್ನು ಈಡೇರಿಸುವಲ್ಲಿ ಸನ್ಮಾನ್ಯ ನರೇಂದ್ರ ಮೋದಿ ಸರಕಾರ ಯಶಸ್ವಿಯಾಗಿದೆ.‌
Reply Retweet Like